ಮುಖ್ಯ ಸಂಗೀತಗಾರನಿಗೆ. "ನಾಶ ಮಾಡಬೇಡಿ" ಎಂದು ಹೊಂದಿಸಿ. ಆಸಾಫ್‌ನ ಕೀರ್ತನೆ. ಒಂದು ಹಾಡು.
ದೇವರ ನ್ಯಾಯದ ತೀರ್ಪಿಗೆ ಥ್ಯಾಂಕ್ಸ್ಗಿವಿಂಗ್

1. ನಿನ್ನನ್ನು ಕೊಂಡಾಡುತ್ತೇವೆ; ಓ ದೇವರೇ, ನಿನ್ನನ್ನು ಕೊಂಡಾಡುತ್ತೇವೆ; ಪ್ರಕಟ ವಾಗುವ ನಿನ್ನ ಅದ್ಭುತ ಕಾರ್ಯಗಳಿಗೆ ನಿನ್ನ ನಾಮವು ಸವಿಾಪವಾಗಿದೆ.

2. ನಾನು ಸಭೆಯನ್ನು ಅಂಗೀಕರಿಸು ವಾಗ ಸರಿಯಾಗಿ ನ್ಯಾಯತೀರಿಸುವೆನು;

3. ಭೂಮಿಯೂ ಅದರ ನಿವಾಸಿಗಳೆಲ್ಲರೂ ಕರಗಿದ್ದಾರೆ; ನಾನು ಅದರ ಸ್ಥಂಭಗಳನ್ನು ನಿಲ್ಲಿಸುತ್ತೇನೆ ಸೆಲಾ.

4. ಮೂರ್ಖತನದಿಂದ ವರ್ತಿಸಬೇಡಿರಿ ಎಂದು ಮೂರ್ಖರಿಗೆ ಹೇಳುತ್ತೇನೆ. ಕೊಂಬು ಎತ್ತಬೇಡಿರಿ ಎಂದು ದುಷ್ಟರಿಗೆ ಹೇಳಿದೆನು.

5. ನಿಮ್ಮ ಕೊಂಬನ್ನು ಉನ್ನತಕ್ಕೆ ಎತ್ತಬೇಡಿರಿ; ಬೊಗ್ಗದ ಕುತ್ತಿಗೆಯಿಂದ ಮಾತಾಡಬೇಡಿರಿ.

6. ಉದ್ಧಾರವು ಮೂಡಣದಿಂದಲೂ ಪಡುವಣದಿಂದಲೂ ಅಲ್ಲ; ಇಲ್ಲವೆ ದಕ್ಷಿಣದಿಂದಲೂ ಬರುವದಿಲ್ಲ.

7. ಆದರೆ ದೇವರು ನ್ಯಾಯತೀರಿಸುವಾ ತನಾಗಿದ್ದಾನೆ; ಒಬ್ಬನನ್ನು ತಗ್ಗಿಸುತ್ತಾನೆ; ಇನ್ನೊಬ್ಬನನ್ನು ಎತ್ತುತ್ತಾನೆ.

8. ಕರ್ತನ ಕೈಯಲ್ಲಿ ಪಾತ್ರೆಯು ಉಂಟು; ದ್ರಾಕ್ಷಾರಸವು ಕೆಂಪಾಗಿದೆ. ಕಲಬೆರಿಕೆಯಿಂದ ತುಂಬಿ ಅದೆ; ಅದರಿಂದ ಆತನು ಹೊಯ್ಯುತ್ತಾನೆ; ಅದರ ಮಡ್ಡಿಯನ್ನು ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು.

9. ಆದರೆ ನಾನು ಎಂದೆಂದಿಗೂ ಪ್ರಕಟಿಸುವೆನು, ಯಾಕೋಬನ ದೇವರ ಸ್ತುತಿಗಳನ್ನು ಹಾಡುವೆನು;

10. ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಬಿಡುವೆನು; ಆದರೆ ನೀತಿವಂತರ ಕೊಂಬುಗಳು ಎತ್ತಲ್ಪಡುವವು.

Bibles

Books

Chapters