ಅವರ ನಿರಂತರ ಕರುಣೆಗಾಗಿ ದೇವರಿಗೆ ಥ್ಯಾಂಕ್ಸ್ಗಿವಿಂಗ್

1. ಕರ್ತನನ್ನು ಕೊಂಡಾಡಿರಿ, ಆತನು ಒಳ್ಳೆಯವನು; ಆತನ ಕರುಣೆಯು ಎಂದೆಂದಿಗೂ ಅದೆ.

2. ದೇವರುಗಳ ದೇವರನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

3. ಕರ್ತರ ಕರ್ತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

4. ಒಬ್ಬನಾಗಿ ದೊಡ್ಡ ಅದ್ಭುತಗಳನ್ನು ಮಾಡುವಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

5. ಆಕಾಶ ವನ್ನು ಜ್ಞಾನದಿಂದ ಉಂಟುಮಾಡಿದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

6. ಭೂಮಿಯನ್ನು ನೀರಿನ ಮೇಲೆ ಹಾಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

7. ದೊಡ್ಡ ಬೆಳಕುಗಳನ್ನು ಉಂಟು ಮಾಡಿದಾತ ನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

8. ಹಗಲನ್ನು ಆಳುವದಕ್ಕೆ ಸೂರ್ಯನನ್ನು ಉಂಟು ಮಾಡಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

9. ಇರುಳನ್ನು ಆಳುವದಕ್ಕೆ ಚಂದ್ರ ನಕ್ಷತ್ರಗಳನ್ನು ಉಂಟು ಮಾಡಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

10. ಐಗುಪ್ತದ ಚೊಚ್ಚಲಾದವುಗಳನ್ನು ಹೊಡೆದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

11. ಇಸ್ರಾಯೇಲನನ್ನು ಅವರ ಮಧ್ಯದಲ್ಲಿಂದ ಹೊರಗೆ ಬರಮಾಡಿದಾತನನ್ನು ಕೊಂಡಾಡಿರಿ; ಆತನ ಕರು ಣೆಯು ಎಂದೆಂದಿಗೂ ಅದೆ.

12. ಬಲವಾದ ಕೈಯಿಂ ದಲೂ ಚಾಚಿದ ತೋಳಿನಿಂದಲೂ ಅವರನ್ನು ಹೊರಗೆ ತಂದನು; ಆತನ ಕರುಣೆಯು ಎಂದೆಂದಿಗೂ ಅದೆ.

13. ಕೆಂಪು ಸಮುದ್ರವನ್ನು ವಿಭಾಗಿಸಿದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

14. ಇಸ್ರಾಯೇಲನ್ನು ಅದರ ನಡುವೆ ನಡಿಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

15. ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮು ದ್ರದಲ್ಲಿ ಕೆಡವಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

16. ತನ್ನ ಜನರನ್ನು ಅರಣ್ಯದಲ್ಲಿ ನಡೆಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

17. ದೊಡ್ಡ ಅರಸುಗಳನ್ನು ಹೊಡೆದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

18. ಪ್ರಸಿ ದ್ಧರಾದ ಅರಸುಗಳನ್ನು ಕೊಂದುಹಾಕಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

19. ಅಮೋರಿಯರ ಅರಸನಾದ ಸೀಹೋನನು ಒಬ್ಬ; ಆತನ ಕರುಣೆಯು ಎಂದೆಂದಿಗೂ ಅದೆ.

20. ಬಾಷಾ ನಿನ ಅರಸನಾದ ಓಗನೊಬ್ಬ; ಆತನ ಕರುಣೆಯು ಎಂದೆಂದಿಗೂ ಅದೆ.

21. ಅವರ ದೇಶವನ್ನು ಬಾಧ್ಯತೆ ಯಾಗಿ ಕೊಟ್ಟಾತನನ್ನು ಕೊಂಡಾಡಿರಿ; ಆತನ ಕರು ಣೆಯು ಎಂದೆಂದಿಗೂ ಅದೆ.

22. ತನ್ನ ಸೇವಕನಾದ ಇಸ್ರಾಯೇಲಿಗೆ ಅದು ಬಾಧ್ಯತೆಯಾಗಿದೆ; ಆತನ ಕರುಣೆಯು ಎಂದೆಂದಿಗೂ ಅದೆ.

23. ನಮ್ಮ ದೀನಸ್ಥಿತಿಯಲ್ಲಿ ನಮ್ಮನ್ನು ನೆನಸಿ ಕೊಂಡಾ ತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂ ದಿಗೂ ಅದೆ.

24. ನಮ್ಮ ವೈರಿಗಳಿಂದ ನಮ್ಮನ್ನು ಬಿಡಿ ಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

25. ಮನುಷ್ಯರಿಗೆಲ್ಲಾ ಆಹಾರ ಕೊಡುವಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

26. ಪರಲೋಕದ ದೇವರನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

Bibles

Books

Chapters