ಮುಖ್ಯ ಸಂಗೀತಗಾರನಿಗೆ. ಪ್ರವಾದಿ ನಾಥನ್ ಬತ್ಷೆಬಾಗೆ ಹೋದ ನಂತರ ಅವನ ಬಳಿಗೆ ಹೋದಾಗ ದಾವೀದನ ಕೀರ್ತನೆ.
ಪಶ್ಚಾತ್ತಾಪದ ಪ್ರಾರ್ಥನೆ

1. ಓ ದೇವರೇ, ನನ್ನ ಮೇಲೆ ಕರುಣೆಯಿಡು; ನಿನ್ನ ಪ್ರೀತಿಕರುಣೆಯ ಪ್ರಕಾರ ನಿನ್ನ ಅತಿ ಶಯವಾದ ಅಂತಃಕರುಣೆಗಳ ಪ್ರಕಾರ ನನ್ನ ದ್ರೋಹ ಗಳನ್ನು ಅಳಿಸಿಬಿಡು.

2. ನನ್ನ ಅಕ್ರಮದಿಂದ ನನ್ನನ್ನು ಪೂರ್ಣವಾಗಿ ತೊಳೆ; ನನ್ನ ಪಾಪದಿಂದ ನನ್ನನ್ನು ಶುದ್ಧಿಮಾಡು.

3. ನನ್ನ ದ್ರೋಹಗಳನ್ನು ನಾನು ಒಪ್ಪಿ ಕೊಳ್ಳುತ್ತೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ.

4. ನೀನು ನಿನ್ನ ಮಾತುಗಳಲ್ಲಿ ನೀತಿವಂತ ನಾಗಿಯೂ ನಿನ್ನ ನ್ಯಾಯತೀರ್ವಿಕೆಯಲ್ಲಿ ನಿರ್ಮಲನಾ ಗಿಯೂ ಇದ್ದಿಯಲ್ಲಾ; ನಿನಗೆ ಮಾತ್ರವೇ ವಿರೋಧ ವಾಗಿ ನಾನು ಪಾಪಮಾಡಿ ನಿನ್ನ ದೃಷ್ಟಿಯಲ್ಲಿ ಈ ಕೆಟ್ಟದ್ದನ್ನು ಮಾಡಿದ್ದೇನೆ.

5. ಇಗೋ, ನಾನು ಅಕ್ರ ಮದಲ್ಲಿ ರೂಪಿಸಲ್ಪಟ್ಟೆನು; ಪಾಪದಲ್ಲಿ ನನ್ನ ತಾಯಿ ನನ್ನನ್ನು ಗರ್ಭಧರಿಸಿದಳು.

6. ಇಗೋ, ಅಂತರಂಗದಲ್ಲಿ ನೀನು ಸತ್ಯವನ್ನು ಅಪೇಕ್ಷಿಸುತ್ತೀ; ರಹಸ್ಯದಲ್ಲಿ ನನಗೆ ಜ್ಞಾನವನ್ನು ನೀನು ತಿಳಿಯಮಾಡು.

7. ಹಿಸ್ಸೋಪ್‌ನಿಂದ ನನ್ನನ್ನು ತೊಳೆ; ಆಗ ನಾನು ಶುಚಿಯಾಗುವೆನು. ನನ್ನನ್ನು ತೊಳೆ, ಆಗ ಹಿಮಕ್ಕಿಂತ ಬಿಳುಪಾಗುವೆನು.

8. ನಾನು ಉತ್ಸಾಹವನ್ನೂ ಸಂತೋಷವನ್ನೂ ಕೇಳುವ ಹಾಗೆ ಮಾಡು. ಆಗ ನನ್ನ ಮುರಿದ ಎಲುಬುಗಳು ಆನಂದಿಸುವವು.

9. ನನ್ನ ಪಾಪಗಳನ್ನು ನೋಡದಂತೆ ನೀನು ವಿಮುಖನಾಗು; ನನ್ನ ಅಕ್ರಮಗಳನ್ನೆಲ್ಲಾ ಅಳಿಸಿ ಬಿಡು.

10. ಓ ದೇವರೇ, ಶುದ್ಧಹೃದಯವನ್ನು ನನ್ನಲ್ಲಿ ಸೃಷ್ಟಿಸು, ಸ್ಥಿರವಾದ ಆತ್ಮವನ್ನು ನನ್ನ ಅಂತರಂಗದಲ್ಲಿ ನೂತನಪಡಿಸು.

11. ನಿನ್ನ ಸಮ್ಮುಖದಿಂದ ನನ್ನನ್ನು ಹೊರಗೆ ಹಾಕಬೇಡ; ನಿನ್ನ ಪರಿಶುದ್ಧಾತ್ಮನನ್ನು ನನ್ನಿಂದ ತೆಗೆದುಕೊಳ್ಳಬೇಡ.

12. ನಿನ್ನ ರಕ್ಷಣೆಯ ಆನಂದವನ್ನು ನನಗೆ ತಿರುಗಿಕೊಡು; ನಿನ್ನ ಸಿದ್ಧಮನಸ್ಸಿನಿಂದ ನನ್ನನ್ನು ಮೇಲೆತ್ತು.

13. ಆಗ ದ್ರೋಹಿಗಳಿಗೆ ನಿನ್ನ ಮಾರ್ಗಗಳನ್ನು ಕಲಿಸುವೆನು; ಪಾಪಾತ್ಮರು ನಿನ್ನ ಕಡೆಗೆ ತಿರುಗುವರು.

14. ಓ ದೇವರೇ, ನನ್ನ ರಕ್ಷಣೆಯ ದೇವರೇ, ರಕ್ತಾಪರಾಧ ದಿಂದ ನೀನು ನನ್ನನ್ನು ಬಿಡಿಸು; ಆಗ ನನ್ನ ನಾಲಿಗೆಯು ನಿನ್ನ ನೀತಿಯನ್ನು ಗಟ್ಟಿಯಾಗಿ ಹಾಡುವದು.

15. ಓ ಕರ್ತನೇ, ನನ್ನ ತುಟಿಗಳನ್ನು ತೆರೆ; ಆಗ ನನ್ನ ಬಾಯಿ ನಿನ್ನ ಸ್ತೋತ್ರವನ್ನು ಪ್ರಕಟಮಾಡುವದು.

16. ಯಜ್ಞ ವನ್ನು ನೀನು ಇಷ್ಟಪಡುದಿಲ್ಲ. ಇಲ್ಲವಾದರೆ ನಾನು ಅದನ್ನು ಕೊಡುತ್ತಿದ್ದೆನು. ದಹನಬಲಿಯಲ್ಲಿ ನೀನು ಸಂತೋಷಪಡುವದಿಲ್ಲ.

17. ಮುರಿದ ಮನಸ್ಸೇ ದೇವರ ಯಜ್ಞಗಳು. ಓ ದೇವರೇ, ಪಶ್ಚಾತ್ತಾಪದಿಂದ ಜಜ್ಜಿ ಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.

18. ನಿನ್ನ ದಿವ್ಯ ಚಿತ್ತದ ಪ್ರಕಾರ ಚೀಯೋನಿಗೆ ಒಳ್ಳೇದು ಮಾಡು; ಯೆರೂಸಲೇಮಿನ ಗೋಡೆಗಳನ್ನು ಕಟ್ಟು.

19. ಆಗ ನೀತಿಯ ಯಜ್ಞಗಳಲ್ಲಿಯೂ ದಹನ ಬಲಿಯಲ್ಲಿಯೂ ಪೂರ್ಣವಾದ ದಹನಬಲಿಯ ಲ್ಲಿಯೂ ನೀನು ಸಂತೋಷಪಡುವಿ; ಆಗ ನಿನ್ನ ಬಲಿ ಪೀಠದ ಮೇಲೆ ಅವರು ಹೋರಿಗಳನ್ನು ಅರ್ಪಿಸುವರು.

Bibles

Books

Chapters