ಆರೋಹಣಗಳ ಹಾಡು.
ಲಾರ್ಡ್ ತನ್ನ ಜನರ ಶಕ್ತಿ

1. ಕರ್ತನಲ್ಲಿ ಭರವಸವಿಡುವವರು ಚೀಯೋನ್‌ ಪರ್ವತದ ಹಾಗಿ ದ್ದಾರೆ; ಅದು ಕದಲದೆ ಯುಗಯುಗಕ್ಕೂ ಇರುವದು.

2. ಯೆರೂಸಲೇಮಿನ ಸುತ್ತಲೂ ಬೆಟ್ಟಗಳಿರುವಂತೆ ಕರ್ತನು ಈಗಿನಿಂದ ಯುಗಯುಗಕ್ಕೂ ತನ್ನ ಜನರ ಸುತ್ತಲೂ ಇದ್ದಾನೆ.

3. ನೀತಿವಂತರು ತಮ್ಮ ಕೈಗಳನ್ನು ಅನ್ಯಾಯಕ್ಕೆ ಚಾಚದ ಹಾಗೆ, ದುಷ್ಟನ ಕೋಲು ನೀತಿವಂತರ ಸ್ವಾಸ್ತ್ಯದ ಮೇಲೆ ನೆಲೆಯಾಗಿರುವದಿಲ್ಲ.

4. ಓ ಕರ್ತನೇ, ಒಳ್ಳೆಯವರಿಗೂ ಯಥಾರ್ಥ ಹೃದಯವುಳ್ಳವರಿಗೂ ಒಳ್ಳೇದನ್ನು ಮಾಡು.

5. ಆದರೆ ತಮ್ಮ ಡೊಂಕು ಮಾರ್ಗಗಳಲ್ಲಿ ತಿರುಗುವವರನ್ನು ದುಷ್ಟತನ ಮಾಡುವವರ ಸಂಗಡ ಕರ್ತನು ಹೋಗ ಮಾಡುವನು. ಇಸ್ರಾಯೇಲಿನ ಮೇಲೆ ಸಮಾಧಾನ ವಿರುವದು.

Bibles

Books

Chapters