ದಾವೀದನ ಒಂದು ಕೀರ್ತನೆ.
ಭಗವಂತನೊಂದಿಗೆ ವಾಸಿಸುವವರ ಪಾತ್ರ

1. ಕರ್ತನೇ, ನಿನ್ನ ಗುಡಾರದಲ್ಲಿ ತಂಗುವವನು ಯಾರು? ನಿನ್ನ ಪರಿಶುದ್ಧ ಪರ್ವತ ದಲ್ಲಿ ವಾಸಮಾಡುವವನು ಯಾರು?

2. ಯಥಾರ್ಥವಾಗಿ ನಡೆದು ನೀತಿಯನ್ನು ನಡಿಸಿ ತನ್ನ ಹೃದಯದಲ್ಲಿ ಸತ್ಯವನ್ನಾಡುವವನೇ.

3. ಅವನು ತನ್ನ ನಾಲಿಗೆಯಿಂದ ಚಾಡಿ ಹೇಳುವದಿಲ್ಲ; ತನ್ನ ನೆರೆಯವನನ್ನು ನಿಂದಿಸು ವದಿಲ್ಲ;

4. ಅವನ ಕಣ್ಣುಗಳಿಗೆ ನೀಚನು ತಿರಸ್ಕರಿಸಲ್ಪ ಟ್ಟಿದ್ದಾನೆ. ಆದರೆ ಕರ್ತನಿಗೆ ಭಯಪಡುವವರನ್ನು ಗೌರವಿಸುತ್ತಾನೆ, ಆಣೆಯಿಂದ ನಷ್ಟವಾದರೂ ಬದಲಾ ಯಿಸದವನು.

5. ತನ್ನ ಹಣವನ್ನು ಬಡ್ಡಿಗೆ ಕೊಡುವದಿಲ್ಲ; ನಿರಪರಾಧಿಗೆ ವಿರೋಧವಾಗಿ ಲಂಚ ತಕ್ಕೊಳ್ಳುವದಿಲ್ಲ. ಇವುಗಳನ್ನು ಮಾಡುವವನು ಎಂದೆಂದಿಗೂ ಕದಲದೆ ಇರುವನು.

Bibles

Books

Chapters