ದಿ ವೇ ಆಫ್ ವಿಸ್ಡಮ್

1. ಜ್ಞಾನವೆಂಬಾಕೆಯು ತನ್ನ ಮನೆಯನ್ನು ಕಟ್ಟಿ ಕೊಂಡಿದ್ದಾಳೆ; ಆಕೆಯು ತನ್ನ ಏಳು ಕಂಬ ಗಳನ್ನು ಕೆತ್ತಿಸಿದ್ದಾಳೆ.

2. ಆಕೆಯು ತನ್ನ ಪಶುಗಳನ್ನು ವಧಿಸಿ, ತನ್ನ ದ್ರಾಕ್ಷಾರಸವನ್ನು ಬೆರಸಿ, ತನ್ನ ಮೇಜನ್ನು ಸಹ ಸಿದ್ಧಪಡಿಸಿದಳು.

3. ಆಕೆಯು ತನ್ನ ಕನ್ನಿಕೆಯರನ್ನು ಕಳುಹಿಸುತ್ತಾಳೆ. ಆಕೆಯು ಪಟ್ಟಣದ ಅತಿ ಉನ್ನತ ಸ್ಥಳಗಳಲ್ಲಿ--

4. ಮೂರ್ಖನು ಯಾವನೋ ಅವನು ಇಲ್ಲಿಗೆ ತಿರುಗಲಿ ಎಂದು ಕೂಗುತ್ತಾಳೆ. ತಿಳುವಳಿಕೆ ಇಲ್ಲದೆ ಇರುವವನಿಗೆ ಆಕೆಯು--

5. ಬಾ, ನನ್ನ ರೊಟ್ಟಿಯನ್ನು ತಿಂದು ನಾನು ಬೆರಸಿದ ದ್ರಾಕ್ಷಾ ರಸವನ್ನು ಕುಡಿ ಎಂದೂ

6. ಮೂಢರನ್ನು ಬಿಟ್ಟು ಬಾಳು ಮತ್ತು ವಿವೇಕದ ಮಾರ್ಗದಲ್ಲಿ ಹೋಗು ಎಂದೂ ಕೂಗುತ್ತಾಳೆ.

7. ಪರಿಹಾಸ್ಯಮಾಡುವವನನ್ನು ಗದರಿಸುವವನು ತನಗೆ ತಾನೇ ಅವಮಾನಕ್ಕೆ ಗುರಿಮಾಡಿಕೊಳ್ಳುವನು; ದುಷ್ಟನನ್ನು ಗದರಿಸುವವನು ತನಗೆ ತಾನೇ ಕಳಂಕವನ್ನು ತಂದುಕೊಳ್ಳುವನು.

8. ಪರಿಹಾಸ್ಯಮಾಡುವವನು ನಿನ್ನನ್ನು ಹಗೆಮಾಡದಂತೆ ಅವನನ್ನು ಗದರಿಸಬೇಡ. ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿ ಮಾಡುವನು.

9. ಜ್ಞಾನಿಗೆ ಶಿಕ್ಷಣ ಮಾಡಿದರೆ ಅವನು ಇನ್ನೂ ಹೆಚ್ಚಾಗಿ ಜ್ಞಾನವಂತನಾಗಿರುವನು; ನೀತಿವಂತ ನಿಗೆ ಬೋಧಿಸಿದರೆ ಅವನು ಜ್ಞಾನವನ್ನು ಹೆಚ್ಚಿಸಿ ಕೊಳ್ಳುವನು. ಕರ್ತನ ಭಯವೇ ಜ್ಞಾನಕ್ಕೆ ಮೂಲವು.

10. ಪರಿಶುದ್ಧರ ತಿಳುವಳಿಕೆಯೇ ವಿವೇಕವು.

11. ನನ್ನ ಮೂಲಕ ನಿನ್ನ ದಿನಗಳು ಹೆಚ್ಚುವವು; ನಿನ್ನ ಜೀವನದ ವರುಷಗಳು ವೃದ್ಧಿಯಾಗುವವು.

12. ನೀನು ಜ್ಞಾನಿಯಾ ಗಿದ್ದರೆ ನಿನ್ನಷ್ಟಕ್ಕೆ ನೀನೇ ಜ್ಞಾನಿಯಾಗಿರುವಿ; ನೀನು ನಿಂದಿಸುವವನಾದರೆ ನೀನೇ ಅದನ್ನು ಅನುಭವಿಸುವಿ.

ದ ವೇ ಆಫ್ ಫಾಲಿ

13. ಬುದ್ಧಿಹೀನಳಾದ ಸ್ತ್ರೀಯು ಕೂಗಾಟದವಳು. ಅವಳು ಅಜ್ಞಾನಿ; ಏನೂ ತಿಳಿಯದವಳು.

14. ತನ್ನ ಮನೆಯ ಬಾಗಲಿನಲ್ಲಿ ಪಟ್ಟಣದ ಎತ್ತರವಾದ ಸ್ಥಳಗಳ ಪೀಠದ ಮೇಲೆ ಕೂತುಕೊಂಡಿರುತ್ತಾಳೆ.

15. ಮಾರ್ಗಕ್ಕನುಸಾರವಾಗಿ ಹೋಗುವ ಪ್ರಯಾಣಿಕ ರನ್ನು ಕರೆಯುತ್ತಾಳೆ.

16. ಯಾವನು ಮೂಢನೋ ಅವನು ಇಲ್ಲಿಗೆ ತಿರುಗಲಿ; ವಿವೇಕವಿಲ್ಲದವನಿಗೆ ಆಕೆಯು--

17. ಕದಿಯಲ್ಪಟ್ಟ ನೀರುಗಳು ಸಿಹಿಯಾಗಿವೆ ರಹಸ್ಯ ದಲ್ಲಿ ತಿನ್ನುವ ರೊಟ್ಟಿಯು ರುಚಿಯಾಗಿದೆ ಎಂದು ಹೇಳುತ್ತಾಳೆ.

18. ಆದರೆ ಸತ್ತವರು ಅಲ್ಲಿದ್ದಾರೆಂದೂ ಪಾತಾಳದ ಅಗಾಧಗಳಲ್ಲಿ ಅವಳ ಅಥಿತಿಗಳು ಇದ್ದಾ ರೆಂದೂ ಅವನಿಗೆ ತಿಳಿಯದು.

Bibles

Books

Chapters